ಫಾತಿಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ,ನಾರಂಪಾಡಿ
ಫಾತಿಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ,ನಾರಂಪಾಡಿ
ಫಾತಿಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ,ನಾರಂಪಾಡಿ
ನಹಿ ಜ್ಞಾನೇನ ಸದ್ರಶಂ ಪವಿತ್ರ ವಿಹ ವಿದ್ಯತೆ
ಶಾಲೆಯೇ ಜೀವನದ ಕನ್ನಡಿ , ವಿದ್ಯೆಯೇ ಬಾಳಿನ ಬೆಳಕು
ನಿಸರ್ಗದಲ್ಲಿ ಗಿಡವೊಂದು ಹುಟ್ಟಿ ತನ್ನದೇ ಆದ ರೀತಿಯಲ್ಲಿ ಬೆಳೆಯಬಲ್ಲುದು.ಆದರೆ ಅದಕ್ಕೆ ಸಕಾಲದಲ್ಲಿ ಫಲವತ್ತಾದ ಮಣ್ಣು,ಗೊಬ್ಬರ,ನೀರು ಸರಿಯಾದ ಪ್ರಮಾಣದಲ್ಲಿ ಒದಗಿಸಿ,ಶತ್ರುಗಳಿಂದ ನಾಶವಾಗದಂತೆ ಸಂರಕ್ಷಿಸಿದರೆ ಅದರ ಬೆಳವಣಿಗೆಯು ಚುರುಕುಗೊಂಡು ನಿರಂತರವಾಗುತ್ತದೆ,ಅAತೆಯೇ ಮಗುವಿನ ವಿದ್ಯಾಭ್ಯಾಸದಲ್ಲಿ ಪ್ರಾಥಮಿಕ ಹಂತವು ತುಂಬಾ ಮಹತ್ವದ್ದಾಗಿರುತ್ತದೆ.ಜ್ಞಾನಾರ್ಜನೆ ಮೂಲ ಪಾಠಗಳನ್ನು ಕಲಿತುಕೊಳ್ಳುವ ಅವಧಿಯು ಇದಾಗಿರುತ್ತದೆ ಭಾಶೆ,ಲೆಕ್ಕ,ವಿಜ್ಞಾನ,ಕೌಶಲ್ಯ, ನಡೆನುಡಿ ಸಂಸ್ಕಾರ ಮುಂತಾದವುಗಳನ್ನು ಮಗು ತಿಳಿದುಕೊಳ್ಳಲು ಪ್ರಾಥಮಿಕ ವಿದ್ಯೆ ಸಹಕಾರಿಯಾಗುತ್ತದೆ.ಆದುದರಿಂದ ಮಗುವಿಗೆ ಅಭಿರುಚಿ, ಪ್ರೋತ್ಸಾಹ ತರುವಂತಹ ಹಾಗೂ ಅವರ ಸರ್ವತೋಮುಖ ವಿಕಾಸಕ್ಕೆ ಹಿತಕರವಾಗುವಂತಹ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಠೆಯ ಆದ್ಯ ಕರ್ತವ್ಯವೆನಿಸಿದೆ.
ನಾರಂಪಾಡಿ ಪರಿಸರದಲ್ಲಿ ಅನಕ್ಶರತೆಯ ಕತ್ತಲೆ ಆವರಿಸಿದ್ದಾಗ ಅದನ್ನು ನಿವಾರಿಸಿ ವಿದ್ಯಾದೀಪವನ್ನು ಬೆಳಗಿಸಿದವರು ನಾರಂಪಾಡಿ ಧರ್ಮಕೇಂದ್ರದ ಅಂದಿನ ಧರ್ಮಗುರುಗಳಾದ ವಂ | ಸ್ವಾಮಿ || ಮೈಕಲ್ ನೊರೋನ್ಹಾರವರು.ದೀನ ದಲಿತರ ಉದ್ಧಾರವೇ ತನ್ನ ಪರಮಗುರಿಯೆಂದು ಅರಿತು, ೧೯೫೧ರಲ್ಲಿ ಈ ಪರಿಸರದ ೧೦ ಮಕ್ಕಳನ್ನು ಒಟ್ಟುಗೂಡಿಸಿ ಒಂದು ಪುಟ್ಟ ಗುಡಿಸಿಲಿನಲ್ಲಿ ಅಕ್ಷರಭ್ಯಾಸವನ್ನು ಮದ್ರಾಸ್ ಸಂಸ್ಥಾನದಿAದ ಅನುಮತಿ ಪಡೆದು ಸ್ವತಹ ನೀಡಲು ಪ್ರಾರಂಭಿಸಿದರು.ನAತರ ಕೇರಳ ಸರಕಾರದೊಡನೆ ನಿರಂತರ ಮನವಿಯ ಪ್ರತೀಕವಾಗಿ ೦೧.೦೬.೧೯೫೩ ರಂದು ಈ ಶಾಲೆ ಸ್ಥಾಪನೆಗೊಂಡಿತು.ಸ್ಥಳೀಯ ಜನರ ಹಾಗೂ ದಾನಿಗಳ ಸಹಕಾರದೊಂದಿಗೆ ಮಣ್ಣಿನ ಗೋಡೆಯ ಸಣ್ಣ ಕೊo ಡಿಯನ್ನು ಕಟ್ಟಿಸಿ ದೇವ ಮಾತೆಯಮ್ಮನವರ ಭಕ್ತರಾದ ಸ್ವಾಮಿಯವರು ಶಾಲೆಗೆ ಫಾತಿಮ ಎಂದು ನಾಮಕರಣ ಮಾಡಿದರು.೧೯೬೪ರಂದು ಕೇರಳ ಸರಕಾರದಿಂದ ಶಾಲೆಗೆ ಅಂಗೀಕಾರ ದೊರೆಯಿತು.೧೯೬೯ ರಲ್ಲಿ ಪ್ರಥಮ ವಾರ್ಶಿಕೋತ್ಸವವನ್ನು ವಿಜ್ರಂಭಣೆ ಯಿಂದ ಆಚರಿಸಲಾಯಿತು.೨೦೦೫ರಲ್ಲಿ ಮಲಯಾಳಂ ಮಾಧ್ಯಮ ಸ್ಥಾಪಿಸಲಾಯಿತು.೦೩.೦೮.೨೦೦೮ರಲ್ಲಿ ನೂತನ ಶಾಲಾ ಕಟ್ಟಡವು ಉದ್ಘಾಟನೆಗೊಂಡಿತು. ಪ್ರಸ್ತುತ ಈ ವಿದ್ಯಾದೇಗುಲದಲ್ಲಿ ಮುಖ್ಯೋಪಾಧ್ಯಾಯಿನಿಯೊಳಗೊಂಡು ೧೨ ಮಂದಿ ಶಿಕ್ಷಕ ಶಿಕ್ಷಕಿಯರು ಓರ್ವ ತಾಂತ್ರಿಕ ಅಧ್ಯಾಪಿಕೆ ಹಾಗೂ ಓರ್ವ ಮಧ್ಯಾಹ್ನ ಭೋಜನ ಸಹಾಯಕಿ ಸೇವಾ ಮನೋಭಾವದಿಂದ ದುಡಿಯುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೨೮೨ ವಿಧ್ಯಾರ್ಥಿಗಳಿದ್ದು ಕನ್ನಡ ಹಾಗೂ ಮಲಯಾಳಂ ಭಾಶೆಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ.ಅರಬಿಕ್ಯನ್ನು ಐಚ್ಛಿಕ ವಿಶ ಯವಾಗಿ ಭೋಧಿಸಲಾಗುತ್ತದೆ. ಒಂದನೇ ತರಗತಿಯಿಂದಲೇ ಎಲ್ಲಾ ವಿಧ್ಯಾರ್ಥಿಗಳಿಗೆ ಕನ್ನಡ,ಮಲಯಾಳಂ ಜೊತೆಗೆ ಇಂಗ್ಲೀಶ್,ತಾAತ್ರಿಕ ಶಿಕ್ಷಣವನ್ನು ಕಲಿಸಲಾಗುತ್ತಿದೆ. P Àಲೆ, ಚಿತ್ರರಚನೆ,ಕ್ರೀಡೆ,ಕರಾಟೆ ತರಗತಿಗಳನ್ನು ನೀಡಲಾಗುತ್ತದೆ .ಸಾರ್ವಜನಿಕ ಶಿಕ್ಷಣ ಯಜ್ಞದ ಭಾಗವಾಗಿ ಆಯೋಜಿಸಿರುವ ಎಲ್ಲಾ ಶೈಕ್ಷಣಿಕ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ.ಶಾಲಾ ವಿಧ್ಯಾರ್ಥಿಗಳು ಎಲ್.ಎಸ್ .ಎಸ್ ಪರೀಕ್ಷೆ, ಉಪಜಿಲ್ಲಾ,ಜಿಲ್ಲಾ ಮೇಳ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲಾ ಕೀರ್ತಿಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿರುತ್ತರೆ.೧೯೯೪ರಲ್ಲಿ ಪ್ರಥಮ ಪಿ.ಟಿ ಎ ಸಂಘ ಸ್ಥಾಪಿಸಲಾಯಿತು.೨೦೨೧ರಲ್ಲಿ ಹಳೆ ವಿಧ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ.
ಬದುಕಿನ ವಿಭಿನ್ನ ಹಿನ್ನಲೆಗಳಿಂದ ಬರುವ ವಿಧ್ಯಾರ್ಥಿಗಳ ಸಾಮರ್ಥ್ಯ,ಆಸಕ್ತಿಗಳು ವಿಭಿನ್ನವಾಗಿರುತ್ತದೆ ಎಂಬುದನ್ನು ಅರಿತುಕೊಂಡು, ವೈವಿಧ್ಯಪೂರ್ಣ ಕಲಿಕಾ ಚಟುವಟಿಕೆಗಳನ್ನು ಶಿಶು ಕೇಂದ್ರಿತವಾಗಿ ನೀಡುತ್ತಾ ಪ್ರತಿಯೊಂದು ಮಗುವಿನ ಸಮಗ್ರ ಪ್ರಗತಿಯನ್ನು ಮನಗಂಡು ದೇಶದ ಓರ್ವ ಉತ್ತಮ ಪ್ರಜೆಯನ್ನಾಗಿ ರೂಪುಗೊಳಿಸಲು ನಮ್ಮ ಈ ಸಂಸ್ಥೆ ಅವಿರತ ಪ್ರಯತ್ನಿಸುತ್ತಿದೆ. ಫಾತಿಮ ಮಾತೆಯ ಮೂಲಕ ಭಗವಂತನ ಕçಪೆಯು ಸದಾ ಈ ವಿಧ್ಯಾ ಸಂಸ್ಥೆಯ ಮೇಲೆ ಇರಲಿ,ಕಿರಿಯ ಶಾಲೆಯೂ ಮಾದರಿ ಶಾಲೆಯಾಗಿ ಸದಾ ಪ್ರಜ್ವಲಿಸಲಿ ಹಾಗೂ ಶಾಲೆಯ ಕೀರ್ತಿಯು ಇನ್ನಶ್ಟು ಎತ್ತರಕ್ಕೇರಲಿ ಎಂದು ಹಾರೈಸುತ್ತೇನೆ.
ಭ| ಪ್ರೆಸಿಲ್ಲಾ ಡಿ ಕುನ್ಹಾ
ಶಾಲಾ ಮುಖ್ಯಸ್ಥೆ.